ಚಿತ್ರೋತ್ಸವಗಳ ಇತಿಹಾಸದೊಂದಿಗೆ `ಸುಚಿತ್ರ'ದ ಹೆಸರು ಕೂಡ ತಳಕು ಹಾಕಿಕೊಂಡಿದೆ. . 1971ರಲ್ಲಿ ಆರಂಭವಾದ ಸುಚಿತ್ರ ಚಲನಚಿತ್ರ ಸಮಾಜ ರಾಜ್ಯದಲ್ಲಿ ಚಿತ್ರೋತ್ಸವಗಳಿಗೆ ಉತ್ತಮ ಬುನಾದಿ ಹಾಕಿತು. ವಿಶ್ವದಲ್ಲಿ ನಡೆಯುವ ಚಲನಚಿತ್ರ ಪ್ರಯೊಗಗಳನ್ನೆಲ್ಲಾ ಇಲ್ಲಿನ ಜನರಿಗೆ ಉಣಬಡಿಸುವುದು ಅದರ ಆರಂಭದ ಉದ್ದೇಶವಾಗಿತ್ತು. ಭಾರತೀಯ ಚಿತ್ರಗಳನ್ನು ಪ್ರಚುರಪಡಿಸುವ ಉದ್ದೇಶದಿಂದ `ಚಿತ್ರ ಭಾರತಿ' ಹೆಸರಿನ ಚಿತ್ರಹಬ್ಬವನ್ನು ಏರ್ಪಡಿಸಿತು. ವರ್ಷವಿಡೀ ವಿವಿಧ ಚಿತ್ರೋತ್ಸವಗಳು, ಸಿನಿಮಾ ಕುರಿತ ಕಾರ್ಯಾಗಾರಗಳು, ಸಿನಿಮಾಕ್ಕೆ ಸಂಬಂಧಿಸಿದ ಇತರೆ ಕಲಾ ಪ್ರಕಾರಗಳ ಪ್ರಚಾರದ ಕುರಿತಂತೆ ಆಸಕ್ತಿ ವಹಿಸಿದೆ. . ಮೊದಲನೆ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ, ಸುಚಿತ್ರ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ ಹೆಸರಿನಿಂದಲೇ ಕರೆಯಲ್ಪಟ್ಟಿತ್ತು. ಈ ಭಾರಿಯ ಐದನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ ಡಿಸೆಂಬರ್ ೨೦ರಿಂದ ೨೭ರ ವರೆಗೆ ನೆಡೆಯುತ್ತಿದೆ. == ಇತಿಹಾಸ == ಮೊದಲನೆ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ - 22 28, 2006 ಎರಡನೆ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ - 3 10, 2008 ಮೂರನೆ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ - 2009 ನಾಲ್ಕನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ - ಡಿಸೆಂಬರ್ ೧೫ ರಿಂದ ೨೨, ೨೦೧೧ ಐದನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ - ಡಿಸೆಂಬರ್ ೨೦ ರಿಂದ ೨೭, ೨೦೧೨ ಆರನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ - ಡಿಸೆಂಬರ್ ೨೬, ೨೦೧೩ ರಿಂದ ಜನವರಿ ೨, ೨೦೧೪ ಏಳನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ, ಡಿಸೆಂಬರ್ ೪ ರಿಂದ ೧೧, ೨೦೧೪ ಎಂಟನೆಯ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ, ಜನವರಿ 28 ರಿಂದ ಫೆಬ್ರವೆರಿ 5, 2016 ಒಂಭತ್ತನೆಯ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ, ಫೆಬ್ರವರಿ 2 ರಿಂದ ಫೆಬ್ರವೆರಿ 9, 2017 == ಸಿನಿಮೋತ್ಸವದಲ್ಲಿ ಭಾಗವಹಿಸಿದ ಚಿತ್ರಗಳು == ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ ೨೦೧೨ರಲ್ಲಿ ಪ್ರದರ್ಶಿಸಲ್ಪಟ್ಟ ಚಿತ್ರಗಳು == ಬಾಹ್ಯ ಕೊಂಡಿಗಳು ==